ಮುಖಪುಟ

ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ

 ಸಾಮಾನ್ಯವಾಗಿ ರಾಮಾಯಣ ಮತ್ತು ಮಹಾಭಾರತ ಕಥೆಗಳಲ್ಲಿ ಜೀವನಮೌಲ್ಯಗಳಿವೆ ಎಂಬುದು ಪ್ರತೀತಿಯಲ್ಲಿದೆ. ಇವೆರಡೂ ಪುರಾಣಕಥೆಗಳ ಹೊರತಾಗಿ ಬೇರೊಂದು ಪುರಾಣಕಥೆಯ ಶೋಧನೆಯಲ್ಲಿದ್ದಾಗ ನನ್ನ ಪ್ರಥಮ ತಿರುಮಲೆ ಯಾತ್ರೆಯಲ್ಲಿ ಪ್ರೇರಣೆಯಿಂದಾಗಿ ಪ್ರಕಟವಾದ ಕೃತಿ-
"ಸಪ್ತಗಿರಿ ಸಂಪದ-೧೯೯೭". ಆನಂತರ ಪುನಾರಚನೆಯಲ್ಲಿ ಇನ್ನಷ್ಟು ಮೌಲಿಕವಾಗಿ ಬಂದ ಕೃತಿಯೇ "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ-೨೦೧೩"

ಸುಪ್ರಸಿದ್ಧ ಆಂಗ್ಲ ಸಾಹಿತಿ ಹೇಳಿದ ಒಂದು ಮಾತು "ನಿಜವಾದ ಸಾಹಿತಿಗೆ ಆತನ ಪ್ರತಿಯೊಂದು ಕೃತಿಯೂ ಹೊಸಹುಟ್ಟು. ಇದುವರೆಗೆ ಸಾಧಿಸಲಾಗದ ಏನೋ ಒಂದನ್ನು ಪಡೆಯಲು ಆತ ಮತ್ತೆ ಪ್ರಯತ್ನಿಸಿರುತ್ತಾನೆ. ಇದುವರೆಗೆ ಸೃಷ್ಷಿಸಲಟ್ಟಿರದ, ಇನ್ನೊಬ್ಬರು ಪ್ರಯತ್ನಿಸಿ ವಿಫಲರಾದ, ಪಡೆಯಲಾಗದ ಏನೋ ಒಂದಕ್ಕಾಗಿ ಆತ ತುಡಿತವಿರುತ್ತದೆ. ಕೆಲವೊಮ್ಮೆ, ಭಾರೀ ಅದೃಷ್ಟದಿಂದ ಆತ ಗೆಲ್ಲುತ್ತಾನೆ"
-ಅರ್ನೆಸ್ಟ್ ಹೆಮಿಂಗ್ವೇ (1899-1961). ಅಮೆರಿಕಾದ ಬಹುದೊಡ್ಡ ಬರಹಗಾರ. ನೋಬಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಹೇಳಿದ್ದು.

"ನಾ ಮಾಡಿದೆನೆಂಬುದು ನನ್ನಿಚ್ಛೆಯೇನಲ್ಲ. ಅದಮ್ಯ ಸ್ಫೂರ್ತಿಯಲಿ ಜ್ಞಾನ ಚೈತನ್ಯವನಿತ್ತು ಹರಸಿ ಬರೆಸಿದ ಆ ದೈವಶಕ್ತಿಗೆ ನಮೋ ಎಂಬೆ....!


ಸಹಸ್ರ ಸಹಸ್ರ ವರುಷಗಳಿಂದ ತಿರುಮಲೇಶನ ಶ್ರೀನಿವಾಸ ಕಲ್ಯಾಣ ಕಥೆಯೆಂದರೆ ಇಷ್ಟೇ ಎನ್ನದಿರಿ... ತಾಳ್ಮಯಿಂದ ಓದಿ ನೋಡಿ>>>

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ