ಬುಧವಾರ, ಫೆಬ್ರವರಿ 17, 2021

ವ್ಯಾಸಭಾರತ ಮೂಲ ಅಭಿನವ ಭಾರತ...ನಿರೀಕ್ಷೆಯಲ್ಲಿ...

 ಮಹಾಭಾರತ ಕಥನದಲ್ಲಿ, ಕರ್ಣನನ್ನೇ ಗ್ರೇಟ್ ಮಾಡುವುದು ಸರಿಯಲ್ಲ.

 ಹುಟ್ಟು ನತದೃಷ್ಟ ನಾದರೂ ಬುದ್ಧಿವಂತನಾದವನು ನಕ್ಷತ್ರ ಗ್ರಹಗತಿಗಳನ್ನು ಆಳಲಾರದಾದ  ಎಂಬುದಕ್ಕೆ ಮಾದರಿ.

ಕ್ರೀಡಾಂಗಣದಲ್ಲೇ ಅಂಗರಾಜನನ್ನಾಗಿ ಪಟ್ಟಕಟ್ಟಲು, ಬಂಗಾರ ಪೀಠದ ಮೇಲೆ  ಬಲವಂತವಾಗಿ ಕೂರಿಸಿ ದಾಗ, ಕೊಡವಿಕೊಂಡೆದ್ದು ಹೊರ ಬರಲು ಇದ್ದ ಒಂದು ಅವಕಾಶವನ್ನೂ ಕಳೆದುಕೊಂಡದ್ದಕ್ಕೆ ಮಾದರಿ.

ದುಷ್ಟ ಸಹವಾಸದಲ್ಲೆ ಉಳಿದು ಸನ್ನಿವೇಶದ ಶಿಶುವಾದದ್ದಕ್ಕೆ ಮಾದರಿ.   

ಸಹವಾಸ ದೋಷದಲ್ಲಿ ಹಿಂದಿರುಗಿ ಬರಲಾದಷ್ಟು ದೂರಹೋದುದಕ್ಕೆ  ಮಾದರಿ. 

ಸ್ನೇಹಿತನ ಋಣಕ್ಕೆ ಬದ್ಧನಾಗಿ ಅವನ 

ತಾಳಕ್ಕೆ ತಕ್ಕಂತೆ ಕುಣಿಯುತ್ತ ತನ್ನ ಸ್ವಂತಿಕೆ

ಸದ್ಗುಣಗಳಿಗೆ ಮಸಿಬಳಿದು ಕೊಂಡ ಮಾದರಿ.   ಆದರೆ,  ತನ್ನಶೀಲಾ ಚಾರಿತ್ರ್ಯ ಉಳಿಸಿಕೊಂಡು, ದುಷ್ಟ  ಸ್ನೇಹಿತನ ಸಿರಿವಂತಕೆಯಿಂದಲೆ ಬಂದದ್ದನ್ನೇ ಸದ್ವಿನಿಯೋಗ ಮಾಡುತ್ತಾ ಮಹಾದಾನಿಯಾದ ಕರ್ಣನಿಗೆ ಕರ್ಣನೇ 

ಎಂಬ ಮಾದರಿ.

ದುಷ್ಟನ ಹೆಂಡತಿ ಭಾನುಮತಿಗೆ ಸೋದರನಂತೇ ಇದ್ದುದಕ್ಕೂ ಮಾದರಿ.

ತನ್ನ ಜನ್ಯರಹಸ್ಯ ತಿಳಿದಂದಿನಿಂದಲೇ ಒಳಗೊಳಗೇ ಕೊರಗಿದ. 

ಅವರು ತನ್ನ ಒಡಹುಟ್ಟಿದವರೆಂದು 

ತಿಳಿದಾಗ ತನಗೆ ಶತ್ರುಗಳಲ್ಲವೆಂದರಿತು, 

ಹೇಗೂ ದೈವ ಬಲ,ಧರ್ಮ ಅವರಿಗಿದೆ

 ಅಲ್ಲೇ ಜಯವೆಂದು ಅರಿತು ತಾನು ಸೋಲುವುದು ನಿಶ್ಚಯವೆಂದೇ  ಜಿಗುಪ್ಸೆ ಯಿಂದಲೇ ಅರ್ಜುನನೊಬ್ಬನ ಮೇಲೇ ಹಿಂಸ್ರ ಪಶುವಿನಂತೆ ಸೆಣಸಾಡುತ್ತ ವೀರ ಮರಣವನ್ನು ತಂದುಕೊಂಡ ದುರಂತ ನಾಯಕ. ನಿರೀಕ್ಷಿಸಿ,  ಶೀಘ್ರ ಬರಲೆಂದು ,

ಶ್ರೀ ಕೃಷ್ಣನ ಕೃಪೆಯಲ್ಲಿ "ಅಭಿನವ ಭಾರತ"

ಮಂಗಳವಾರ, ಡಿಸೆಂಬರ್ 1, 2020

ಬಡತನದ ಬದುಕು ಭವಿಷ್ಯ

"ಶ್ರೀಮಂತರಲ್ಲಿ ಮಡಿವಂತಿಕೆ ಇರುತ್ತದೆ, ಬಡವರಲ್ಲಿ  ಇರುವುದಿಲ್ಲ" ಎನ್ನುವುದು ಸರಿಯಲ್ಲ. ಮಡಿವಂತಿಕೆ ಎನ್ನುವುದಾದರೂ ಏನು? ಅಸ್ಪೃಶ್ಯತೆಯೇ, ಸಭ್ಯತೆಯೇ ಯಾವುದು?

ಬಡವರಲ್ಲಿ  ಸಭ್ಯತೆ ಸಂಸ್ಕೃತಿ ದೇವರು, ಧರ್ಮ ಕರ್ಮದ ಅಂಜಿಕೆ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ...ಬದುಕಿನ ನೂರ್ಮುಖಗಳನ್ನು ಎದುರಿಸಿ ಬಾಳುವ ಛಲ ಇರುವವರು ಬಹು ಸಂಖ್ಯೆಯಲ್ಲಿ ಇರುತ್ತಾರೆ. ಬಡತನದ ದುಡಿಮೆಲಿ ದೇವರನ್ನು ಕಾಣುತ್ತ ಶ್ರೀಮಂತರಾದವರಿದ್ದಾರೆ. 

 ಬಡವರೆಲ್ಲಾ ನಾಳೆಯ ಚಿಂತೆ ಇಲ್ಲದವರಲ್ಲ... ಕೂಲಿ ಕರ್ಮಿಕರಲ್ಲಿ ಗಾರೆ ಕೆಲಸದವರೂ ನಾಳೆಯೊಂದಿದೆ ಎಂಬ ಆಸೆಯಲಿ, ದೈವನಂಬಿಕೆಯಲ್ಲಿ ಕಷ್ಟಾರ್ಜೀತ ಹಣದಲ್ಲೇ ಹೆಂಡತಿ ಮಕ್ಕಳೊಡನೆ ಯಾತ್ರೆ ಮಾಡುತ್ತಾರೆ ಧರ್ಮ ಸ್ಥಳ, ತಿರುಮಲೆ ತಿರುಪತಿಗೆ‌ಹೋಗಿ ಮುಡಿಕೊಡುತ್ತಾರೆ ಹರಕೆ ಕಾಣಿಕೆ ಸಲ್ಲಿಸುತ್ತಾರೆ.ಬಡವರು ಕಂಡ ದೇವರು ಅದಷ್ಟು ದೊಡ್ಡವನೋ.... ಬಡತನದಲ್ಲೇ.ಪ್ರತಿಭಾವಂತರು.ಹೆಚ್ಚು ಇರುತ್ತಾರೆಂಬುದು ಉತ್ಪ್ರೇಕ್ಷೆಯೇನಲ್ಲ..

ಬಡತನಕ್ಕೂ ಪ್ರತಿಭೆಗೂ ದೈವಿತೆಯಲಿ ಕಾಣುವ ಬಿಡಿಸಲಾಗದ ನಂಟು. ಅಂತೆಯೇ ದೈವಭಕ್ತ ವಿಜ್ಞಾನಿಗಳು ಅಂದೂ ಇದ್ದರು ಇಂದಿಗೂ  ಇದ್ದಾರೆ.

ಹಳ್ಳಿ ಯೂರ.ಗುಡಿಗಳಲ್ಲಿ ಕಲ್ಲು ದೇವರ.ಮೂರ್ತಿಗೆ.ಹೂ ಅಪ್ಪಣೆ ಕೇಳಿ ತಮ್ಮ ಬದುಕು.ಭವಿಷ್ಯದ ಕೆಲಸಕಾರ್ಯಗಳನ್ನು ಮಾಡಿ ಗೆಲವು ಕಾಣುತ್ತಾರೆ.

 ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುತ್ತೇವೆ ಬಡತನದಿಂದ ದುಡಿಮೆಯಲ್ಲೇ ಉಳಿತಾಯ ಮಾಡಿ ಸ್ಥಿತಿ ವಂತರಾಗುತ್ತೇವೆ ಎಂಬ ಭರವಸೆಯಲ್ಲಿ ಬದುಕುತ್ತಾರೆ.

ಮಡಿವಂತಿಕೆ ಗಿಂತಲೂ ಬುದ್ಧಿವಂತಿಕೆ ಸಭ್ಯತೆ ಇಲ್ಲದವರಾಗಿದ್ದರೆ ಈ ವ್ಯವಹಾರಿಕ ಪ್ರಪಂಚದಲ್ಲಿ  ಅವರು ಬದುಕುತ್ತಲೇ ಇರಲಿಲ್ಲ!

ಓದಿರಿ, ನನ್ನ ಶ್ರೀ ತಿರುಮಲೇಶನತ್ರಿಗುಣಾತ್ಮಕ ಪ್ರಪಂಚ

ಭಾನುವಾರ, ಏಪ್ರಿಲ್ 21, 2019

ನನ್ನ ಜೀವನದಲ್ಲಿ ಏಪ್ರಿಲ್ 19 ರ ಪ್ರಾಮುಖ್ಯತೆ!
ನನಗೆ  ನೆನಪು, 1993 ರ April ಸೋಮವಾರ (26 ವರ್ಷಗಳ ಹಿಂದೆ) ಅಂದು ಮೊಟ್ಟ ಮೊದಲ ಬಾರಿಗೆ  ಇಲಾಖೆಯ ಎಲ್ ಟಿಸಿ. ಸೌಲಭ್ಯ ಪಡೆದು ಇದ್ದಕ್ಕಿದ್ದಂತೆ ತಿರುಪತಿ ತಿರುಮಲೆ ಯಾತ್ರೆಗೆ ಹೊರಟೆ,  ಅಂದು ನನ್ನ ಶ್ರೀಮತಿ ಯ ಬಹುದಿನದ ಒತ್ತಾಯ ಪೂರ್ವಕ ಅಭಿಲಾಷೆ ಈಡೇರಿತ್ತು.  ಅಂದು ಯಾತ್ರಾರ್ಥಿಗಳಿಗೆ, ಗರ್ಭ ಗುಡಿಯ
ಅತಿ ಸಮೀಪವೇ ದರ್ಶನ ಭಾಗ್ಯ ಲಭಿಸುತ್ತಿತ್ತು.
ನನ್ನ ಹೆಂಡತಿ ಮತ್ತು ಮೂವರು ಗಂಡು ಮಕ್ಕಳನ್ನು ಮುಂದೆ ಬಿಟ್ಟುಕೊಂಡು ಸರತಿ ಸಾಲಿನಲಿ ಬಂದಿದ್ದೆ. ಮಕ್ಕಳೊಂದಿಗೆ ನಿಂತು ನನ್ನಾಕೆ ದರ್ಶನ ಪಡೆದು ಮುಂದೆ ಸಾಗಿ ಹೋದರೂ,
ನಾನು ಮಾತ್ರ ಗರ್ಭಗುಡಿ ಮುಂದೆ ಶ್ರೀನಿವಾಸನ ಮೂರ್ತಿ ನೋಡುತ್ತಾ ನಿಂತು ಬಿಟ್ಟೆ. ಇಂದಿನಂತೆಯೇ ಅಂದೂ 'ನಡೆಯಿರಿ ನಡೆಯಿರಿ' ಎನ್ನುತ್ತ ಸೇವಕರ ಕೂಗೂ, ಕ್ಯೂನಲ್ಲಿ ಕೈಮುಗಿದು ಕೊಡಲೇ ಸಾಗದಿದ್ದರೇ ರೆಟ್ಟೆ ಹಿಡಿದು ಎಳೆಯುವುದಿತ್ತು.
ನಾನೋ ಇಹವನ್ನೇ ಮರೆತು ಶ್ರೀನಿವಾಸನ ಮೂರ್ತಿಯನ್ನು  ತದೇಕ ಚಿತ್ತದಿಂದ ನೋಡುತ್ತಾ ನಿಂತಿದ್ದೆ. ಕೆಲ ಕ್ಷಣಗಳೇ ಕಳೆದಿದ್ದೀತು. ಹಣೆಯಲ್ಲಿ ಕೆಂಪು ನಾಮ, ಮೈಮೇಲೊಂದು ಜರಿ ಶಲ್ಯ ವಿತ್ತು .
ಆಶ್ಚರ್ಯವೆಂದರೆ ಆ ಕ್ಷಣಗಳಲ್ಲಿ ನನ್ನನ್ನು ಕಾವಲು ಸೇವಕರ್ಯಾರೂ ಎಳೆದು ಹೊರ ಹೋಗಿ ಎನ್ನಲಿಲ್ಲ. ನಾನೇ ತಟ್ಟನೆಚ್ಚೆತ್ತು ಸಾಗಿ ಹೊರ ಬಂದಿದ್ದೆ. ಆನಂತರ ಏಳು ಸಲ ತಿರುಮಲೆ ಯಾತ್ರೆಯಾಗಿದೆಯಾದರೂ ಅಂದಿನ ಅಪೂರ್ವ ದರ್ಶನ ಮತ್ತೆ ಲಭಿಸಲಿಲ್ಲ. ಅಂದಿಗಿಂತಲೂ ಇಂದು ಜನದಟ್ಟಣೆ ಹೆಚ್ಚಿದೆ ಹಾಗಾಗಿ ಶಾಂತಿಯುತ ದರ್ಶನಕೆ ಆಸ್ಪದವೂ ಇಲ್ಲವೆನ್ನಿ.
What a coincidence! ಇದೇನು ಸುಂದರ ಸುಮಧುರ ಸ್ಮೃತಿ! ಹೀಗೇ ಸುಮ್ಮನೆ ಕಳಿತಿದ್ದಾಗ,
ಇಂದಿನ ವೃದ್ಧಾಪ್ಯದಲ್ಲಿ ಯಾಕೋ ಅದೇ ಗೆಟಪ್ನಲ್ಲಿ ಈ ಸೆಲ್ ಫೀ ತೆಗೆದಮೇಲೆ ನೆನಪಾಯಿತು; ಇಂದು ನನ್ನ ಜೀವನದಲ್ಲಿ
ಏಪ್ರಿಲ್ 19 ರ ಪ್ರಾಮುಖ್ಯತೆ!

ಸೋಮವಾರ, ಜನವರಿ 18, 2016

ತಿರುಮಲೇಶನತ್ರಿಗುಣಾತ್ಮಕಪ್ರಪಂಚ -ಅವತರಣಿಕೆ ಭಾಗ1

ನೀವು ಶ್ರೀನಿವಾಸ ಕಲ್ಯಾಣ ಕಥೆ ಕೇಳಿದ್ದೀರಿ, ಸಿನಿಮಾ ಕೂಡ ನೋಡಿರುತ್ತೀರಿ.
ಪ್ರಸ್ತುತ ಕೃತಿ ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ, ಶ್ರೀನಿವಾಸ ಕಲ್ಯಾಣ ಕಥೆ
 ಇಲ್ಲಿ ಕಾದಂಬರಿ ರೂಪದಲ್ಲಿದೆಯಲ್ಲದೇ,
ದೇವರು ಧರ್ಮ,ಕರ್ಮ, ಪೂರ್ವಜನ್ಮ. ವಿಗ್ರಹಾರಾದನೆ, ಪೂಜೆ ಪುನಸ್ಕಾರ ಇವುಗಳನ್ನೆಲ್ಲ ವೈಜ್ಞಾನಿಕವಾಗಿ,ತಾತ್ವಿಕವಾಗಿ ಹಾಗೂ ವಾಸ್ತವಿಕವಾಗಿ ವಿಶ್ಲೇಷಣೆ ಮಾಡಲಾಗಿದೆ.
 ಮೂಲಕಥಾ ನಿರೂಪಣೆಯಲ್ಲೇ ಸನ್ನಿವೇಶ, ಸಂಭಾಷಣೆಗಳಲ್ಲಿ ಪಾತ್ರಪೋಷಣೆಗಳಲ್ಲಿ ಸಾರ್ವಕಾಲಿಕ ಜೀವನ ಮೌಲ್ಯಗಳ ದರ್ಶನ ಮಾಡಿಸುತ್ತದೆ ಪ್ರಸ್ತುತ ಕೃತಿ 2013ರ ಎರಡನೇ ಆವೃತಿಯಾಗಿದೆ. [ಹಾರ್ಡ್ ಬೌಂಡ್ ಪುಟಗಳು 400] contact no. 94486 28526

ಸದ್ಯದಲ್ಲೇ ಮೂರನೇ ಆವೃತಿ ಪ್ರಕಟವಾಗಲಿದೆ ಪ್ರತಿಗಳು ಬೆಂಗಳೂರಿನ ಸಪ್ನಬುಕ್ ಹೌಸ್, ಮತ್ತು ತಿರುಪತಿ ಗೋವಿಂದರಾಜ ಸ್ವಾಮಿ ದೇವಾಲಯದ ಶ್ರೀ ರಾಮಕೃಷ್ಣ ವಿವೇಕಾನಂದ ಬುಕ್ ಸ್ಟಾಲ್ ನಲ್ಲಿ ಭರದಿಂದ ಮಾರಾಟವಾಗುತ್ತಿದೆ.

ಗುರುವಾರ, ಸೆಪ್ಟೆಂಬರ್ 17, 2015

Idu TrigunathmakaPrapanchaMovie1

ಇದು ತ್ರಿಗುಣಾತ್ಮಕ ಪ್ರಪಂಚ. ಜಗದ ವಿಷಮತೆಗೆ ದೇವರು ಹೊಣೆಯಲ್ಲ ನಮ್ಮಲ್ಲಿ ಎಲ್ಲೆಡೆಗಳಲ್ಲಿರುವ ಪ್ರಕೃತಿಜನ್ಯ ತ್ರಿಗುಣ ಸ್ವಭಾವಗಳೇ ಕಾರಣ. ಅಲ್ಲದೇ, ವಿಜ್ಞಾನದ ದುರ್ಬಳಕೆಗಳೇ ಕಾರಣ. ಇಲ್ಲಿ ಎಲ್ಲಕಾಲಕ್ಕೂ ರಜಸ್ಸಿನ ಮತ್ತು ತಮಸ್ಸಿನ ಪ್ರಭಾವ ಪರಿಣಾಮಗಳೇ ಎದ್ದು ತೋರುತ್ತಲಿರುತ್ತವೆ. ಅವುಗಳೆಂದರೆ, ರಜಸ್ಸಿನ ಆಸೆ,ಭೋಗದ ಆಮಿಷ,ಪ್ರಲೋಭನೆಗಳಿಂದ ರೋಷ, ಆವೇಶ, ಕ್ರೋಧ, ದ್ವೇಷ, ಹೊಟ್ಟೆಕಿಚ್ಚು, ನೀಚಸ್ವಾರ್ಥಗಳ, ತಮಸ್ಸಿನ ಅಂಧಕಾರದಿಂದ ಅತಿಭೋಗಲಾಲಸೆ,ಅತ್ಯಾಚಾರ,ಧನದುರಾಸೆ,ಅಧಿಕಾರದಾಹ, ಭ್ರಷ್ಟಾಚಾರ, ಸೇಡು, ದಳ್ಳುರಿ, ಸುಲಿಗೆ ಕೊಲೆ, ಭಯೋತ್ಪಾದನೆ ಇವುಗಳೆಲ್ಲ ಮೃಗಗಳಿಗಿಂತ ಹೇಯವಾದ ತಮಂಧದ ಕೇಡುಕು ಅನಾಹುತಗಳು.
ಎಲ್ಲಕಾಲಕ್ಕೂ ಸತ್ವಗುಣ-ಸತ್ ಶಕ್ತಿಯು ಮೂರನೇ ಒಂದು ಭಾಗ ಮಾತ್ರ ಇರುತ್ತದೆಂಬುದು ಗಮನಾರ್ಹವಾಗಿದೆ. ಹೇಳಿ..? ಯಾವ ಗುಂಪಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳಬೇಕೆಂಬುದೂ ನಮಗೇ ಬಿಟ್ಟ ವಿಚಾರವೇ ಆಗಿದೆ ಅಲ್ಲವೇ..?
ಆದರೇನು! ಸತ್ವ-ಸತ್ಶಕ್ತಿಯ ಪ್ರಭಾವ ಪರಿಣಾಮಗಳು ಇಲ್ಲವೆಂದರೂ, ಇದು ಅವ್ಯಕ್ತ ಅಗೋಚರಶಕ್ತಿಯೇ ಆಗಿದ್ದು, ಆಗಾಗ್ಗೆ ಕಂಡುಬರುತ್ತಲೇ ಇರುತ್ತದೆ. ಬೂದಿ ಮುಚ್ಚಿದ ಕೆಂಡಂತೆ ಮತ್ತೆ ಮತ್ತೆ ಸಿಡಿದೇಳುತ್ತಲೇ ಇರುತ್ತದೆ; ಧಾರ್ಮಿಕತೆಯಲ್ಲಿ ಮಾನವೀಯತೆಯಾಗಿ, ಮಾನವೀಯತೆಯಲ್ಲಿ ದೈವಿಕತೆಯಾಗಿ ದೈವಿಕತೆಯಲ್ಲಿ ಧರ್ಮಸಂರಕ್ಷಣೆಗಾಗಿ ಯಾವುದೋ ರೂಪದಲ್ಲಿ ಮತ್ತೆ ಯಾವುದೋ ಧೀಮಂತ ವ್ಯಕ್ತಿತ್ವದ ಕ್ಷಾತ್ರ ತೇಜಸ್ಸಿನಲ್ಲಿ ವಿಶ್ವಜೀವನದಲ್ಲಿ ಎಲ್ಲೆಡೆಗಳಿಗೂ ಬೀರುತ್ತಲೇ ಸತ್ವಗುಣ ಸತ್ಶಕ್ತಿಯ ಹಿರಿಮೆಯನ್ನು ನಿರೂಪಿಸುತ್ತ ಹೊಸ ಇತಿಹಾಸ ರಚಿಸುತ್ತದೆ. [ತ್ರಿಗುಣಗಳ ಬಗ್ಗೆ ಭಗವದ್ಗೀತೆಯಲ್ಲಿ ವಿಶ್ಲೇಷಣೆ ಇದೆ ಅಧ್ಯಾಯ 14]